ಚಿಕ್ಕರಂಗ ಮತ್ತು eagleton

.

Sunday, October 9, 2011

ಅದು ಮದರ್ ತೆರೇಸಾನಾ ..?









CzÀÄ ªÀÄzÀgï vÉgɸÁ£Á..?                                  
vÀ£À £É£À¥ÀÄ PÁqÀÄwÛzÉ. CzÉÆAzÀÄ ¢ªÀ¸À zÉÆqÀØ¥Àà£À ªÀÄ£ÉAiÀÄ ªÀÄÄA¢£À ºÀeÁgÀzÀ°è “¤Ã£ÀÄ EAVèÃµï ¥ÁoÀ ªÀiÁqÉÆÃ ªÉÄÃµÉÆÖçà ¯ÉPÀÑgÀgÉÆæÃ DzÉæ M¼ÉîÃzÀ¥Àà. EAVèõï N¢gÉÆÃ d£À  ¸ÁPÀµÀÄÖ d£À ¹PÁÛgÉ, ¥ÁoÀ ªÀiÁqÉÆÃ d£À ¹UÀ®è. ¤Ã£ÀÄ EAVèõï NzÀ¥Áà..£Á®Pï d£ÀPÉÌ G¥ÀAiÉÆÃUÀ DVè”. zÉÆqÀØ¥Àà£ÀvÀÛ  £ÉÆÃr £ÀUÀÄwÛvÀÄÛ ¨ÉÆZÀÄÑ ¨Á¬ÄAiÀÄ ªÀÄÄR. “EªÀ£ÀÄ FUÁUÉèà ¸ÉÊ£ÀÄì N¢ zÀ¨ÁâQ §A¢zÁÝ£É. QæPÉmï CAzÉæ PÉlÖ ºÀÄZÀÄÑ. NzÀ®è ªÀiÁqÀ®è..E¥ÀàvÁß®ÄÌ WÀAmÉ QæPÉmï CAvÀ vÀ¯É PÉqÀďɯÌAqÀÄ ¥ÉïÁV §A¢zÁ£É”. £À£Àß d£Àä ªÀÈvÁÛAvÀªÀ£ÀÄß eÁ¯ÁqÀÄwÛzÀÝgÀÄ zÉÆqÀØ¥Àà. “ ºÉÆÃVè ©r ªÉAPÀl¥Àà £ÀqɪÀgÉqÀºÀzÉ PÀĽvÀªÀgÉqÀºÀĪÀgÉÃ..?” CAzÀ vÁvÀ £ÀPÀÄÌ ¸ÀĪÀÄä£ÁVzÀÝgÀÄ.
‘vÁvÀ’ CAvÀ¯Éà PÀgÉAiÀÄÄwÛzÉݪÀÅ £ÁªÉ¯Áè ¦æÃw¬ÄAzÀ. CªÀgÀÄ PÀnÖ ¨É¼É¹zÀ ±Á¯É ºÉªÀÄägÀªÁV ¨É¼ÉzÀ »AzÉ vÁvÀ£À ºÉüÀ¯ÁgÀzÀµÀÄÖ vÁåUÀ ¸ÀªÀÄ¥ÀðuÉUÀ½ªÉ. ¨É¼ÀUÉgÉAiÀÄ ¸ÀÄvÀÛªÀÄÄvÀÛ°£À £ÀÆgÉAlÄ ºÀ½îUÀ¼À §qÀªÀÄPÀ̽UÉ GavÀ ²PÀët Hl §mÉÖAiÀÄ£Àß ¤ÃqÀĪÀÅzÀPÁÌV ©¹°£À gÀhļÀªÀ£ÀÄß ¯ÉQ̸ÀzÉ ZÀ¼ÀîPÉgÉAiÀÄ ¸ÁtÂPÉgÉ gÀ¸ÉÛAiÀÄ°è ªÀiÁ¹ºÉÆÃzÀ vÁvÀ£À ©½AiÀÄ §mÉÖUÀ½UÉ ¸ÀªÉzÀÄºÉÆÃzÀ ºÀªÁ¬Ä ZÀ¥Àà°UÀ½UÉ ¯ÉPÀÌ«®..è…! ¸ÀtÚzÉÆAzÀÄ ªÀÄÆ®¨sÀÆvÀ ¸ËPÀAiÀÄðUÀ¼ÀÆ E®èzÀ §AiÀÄ®Ä ¹ÃªÉÄAiÀÄ CqÀ«AiÀÄ°è ‘±ÁgÀzÀ ªÀÄA¢gÀ’ JA§ C¸ÁzsÁgÀt PÀ£À¸À£Àß ºÉuÉzÀÄ ¸ÁPÁgÀUÉÆ½¹zÀ ªÁªÀÄ£ÀªÀÄÆwð PÀȵÀÚ±Á¹ÛçUÀ¼ÀÄ.
‘agÀA «gÀAa £ÀB agÀA «gÀAa’. ‘vÀA¨ÉÆÃ ¸ÀÄvÀ ªÀÄÄQÛ ªÀÄÄvÁ ¸ÀĨsÉÆÃvÀA’ PÀ£ÀßqÀ-EAVèÃµï ªÁåPÀgÀt vÀgÀUÀwAiÀÄ°è ‘PÀAw’AiÀÄ MAzÀÄ ¥ÀzÀåzÀ ¸Á®Ä ºÉýzÀÝgÀÄ vÁvÀ. EzÀgÀ «±ÉõÀ »ÃVzÉ. F ¸Á®£ÀÄß »AzÀÆ ªÀÄÄAzÀÄ ªÀiÁr N¢zÁUÀÆå CxÀð ªÀåvÁå¸ÀªÁUÀzÉà ºÁUÉAiÉÄà G½AiÀÄĪÀAxÀºÀzÀÄÝ. EAxÀºÀ £ÀÆgÁgÀÄ ¥ÀzÀåUÀ¼ÀÄ vÁvÀ£À ¨Á¬Ä¬ÄAzÀ ¥Àl¥Àl£É §gÀÄwÛzÀݪÀÅ. eÁÕ£ÀUÀAUÉ fêÀd®ªÁV ºÀÄnÖ ¸Á«gÁgÀÄ ªÀÄPÀ̽UÉ £À¢AiÀiÁV vÁvÀ£À gÀÆ¥ÀzÀ°è ¸ÀzÁ ºÀjzÀÄºÉÆÃVzÁݼÉ. ºÀjAiÀÄÄwÛzÁݼÉ.
¨É¼ÀUÉgÉAiÀÄ D¹£À°ègÀĪÀ UÉÆ®ègÀºÀnÖAiÀÄ ºÉtÄÚ ªÀÄUÀ¼ÀÄ ¹jAiÀÄfÓAiÀÄ£Àß £ÁrUÉ ¥ÀjZÀ¬Ä¹zÀgÀÄ vÁvÀ. ‘eÁ£À¥ÀzÀ PÀA¥ÀÆålgï’ JAzÉà ªÀģɪÀiÁvÁzÀ¼ÀÄ ¹jAiÀÄfÓ. §AiÀÄ®Ä ¹ÃªÉÄAiÀÄ ªÀÄÆ¯ÉAiÀİègÀĪÀ ¨É¼ÀUÉgÉAiÉÄA§ ºÀ½îAiÉÆAzÀgÀ°è ¨ÉÊgÀ¥Àà, «ÃgÉAzÀæ ºÉUÀÎqÉ gÀAxÀºÀ £ÀÆgÁgÀÄ UÀtågÀ£Àß PÀgÉvÀAzÀÄ D £É®ªÀ£ÀÄß vÀt¹zÀÝgÀÄ ±Á¹Ûç vÁvÀ.
©½AiÀÄ §mÉÖUÀ¼À£ÀÄß zsÀj¹gÀĪÀ ¸À£Áå¹. DvÀ£À vÀ¯É ¨ÉÆÃ½¹®è¢gÀ§ºÀÄzÀÄ. ªÀÄ£À ¨ÉÆÃ¼ÁVzÉ. vÀ£Àß vÉÆÃlzÀ ªÀÄzsÀåzÀ°è MAzÀÄ UÀÄr¹®£ÀÄß ¤«Äð¹PÉÆAqÀÄ C°è ªÁ¹¸ÀÄwÛgÀĪÀ DvÀ ‘¥ÀzÀä¥ÀvÀæ «ÄªÁA¨sÀ¸À’£ÀAvÉ ¨Á¼ÀÄwÛzÁÝgÉ. ¢£ÀzÀ §ºÀÄPÁ®ªÀ£ÀÄß zsÁå£ÀzÀ°è PÀ¼ÉAiÀÄĪÀ F ¨ÉÊgÁV ªÀÄ£ÉUÉ §AzÀªÀjUÉ CªÀgÀÄ EgÀĪÀµÀÄÖ ¢£À D±À£ÀªÀ¸À£ÀUÀ¼À£ÀÄß ¤ÃqÀÄvÁÛgÉ. DvÀ£À ªÀÄ£ÉUÉ ©ÃUÀ«®è. ¸ÀÄzsÁªÀÄ£À ªÀÄ£ÉAiÀiÁzÀÝjAzÀ PÀ¼ÀîvÀ£ÀzÀ ¨sÀAiÀÄ«®è. £Á¼ÉUÉãÀÄ JA§ C¼ÀÄQ®è. CªÀgÀ ¤zÉÝ ¤UÀ«ð. ºÁ¹UÉ ¨ÉÃqÀ, ºÉÆ¢PÉ ¨ÉÃqÀ. J¯ÉèAzÀgÀ°è ºÁUÉ CªÀgÀ£ÀÄß UÁqsÀªÁV D®AV¸ÀÄvÀÛzÉ. ‘aAvɬĮèzÀªÀjUÉ ¸ÀAvÉAiÀÄ°è ¤zÉÝ’ JA§ ºÁUÉ. ¨sÀAiÀĪÉA§ÄzÀÄ DvÀ£À §½ ¸ÀĽAiÀÄĪÀÅ¢®è. ºÀwÛgÀzÀ°è ºÁªÀÅ ºÀjAiÀÄÄwÛzÀÝgÉ CzÀgÀ ¥ÁrUÉ CzÀÄ ºÉÆÃUÀÄvÀÛzÉ. ¥Á¥À..CzÀgÀ ªÀÄ£ÉUÉ £ÁªÀÅ §A¢zÉÝêÉ, J£ÀÄßvÁÛgÉ. ºÁUÉAzÀÄ DvÀ£À dqÀ ¸Àé¨sÁªÀªÀ£ÀÄß DgÉÆÃ¦¸ÀĪÀAw®è. zsÁå£À¢AzÀ §»ªÀÄÄðR£ÁzÁUÀ DvÀ ¥ÁzÀgÀ¸ÀzÀµÀÄÖ ZÀÄgÀÄPÀÄ. EzÀ£ÀÄß CxÀð ªÀiÁrPÉÆ¼Àî¨ÉÃPÀÄ. K£ÀÄ ªÀiÁrPÉÆ¼Àî¨ÉÃPÉÆÃ..! vÁvÀ£À  C£ÀĨsÀªÀzÀ PÀAvÉ ‘ªÀÄgÉAiÀįÁ¢ÃvÉ’ ¥ÀĸÀÛPÀzÀ DgÀA¨sÀzÀ°è vÀ.¸ÀÄ.±ÁªÀÄgÁAiÀÄgÀÄ vÁvÀ£À PÀÄjvÀÄ §gÉzÀzÀÄÝ »ÃUÉ.
±Á¹ÛçUÀ¼À ªÉƪÀÄäUÀ CgÀ«AzÀ £À£Àß ¸ÉßûvÀ. CªÀ£ÉÆA¢UÉ EzÀݵÀÄÖ ¢£ÀUÀ¼À°è vÁvÀ£À£Àß E£ÀßµÀÄÖ ºÀwÛgÀ¢AzÀ £ÉÆÃqÀĪÀAvÁAiÀÄÄÛ. CAzÀÄ £À£Àß MgÀlÄ DlUÀ¼À£Àß ¸À»¹, w¢Ý wÃrzÀ ªÀÄA¢gÀzÀ ¨sÉÆÃzsÀPÀgÀ£Àß £É£ÉAiÀÄzÀ ¢£ÀUÀ½®è. F ¸ÀzsÀå CgÀ«AzÀ, zsÀ£ÀAdAiÀÄ ±ÁgÀzÀ ªÀÄA¢gÀzÀ°èAiÉÄà ¸ÉêÉAiÀİèzÁÝgÉ.
¨É¼ÀUÉgÉ PÀȵÀÚ±Á¹ÛçUÀ¼À PÀÄjvÀÄ ¸ÀtÚ £É£ÀºÉÆAzÀ£ÀÄß vÉgÉ¢nÖzÉÝãÉ. PÉzÀQzÀgÉ §gÉAiÀİPÉÌ F d£ÀäªÉÇAzÀÄ ¸ÁPÁUÀ°QÌ®è. CªÀgÉÆ§âgÀÄ £Á PÀAqÀ ¸ÀºÀd zÁ±Àð¤PÀ, ±ÉÊPÀëtÂPÀ vÀdÕ, «ZÁgÀªÁ¢, ¸Á»w. J®èzÀQÌAvÀ®Æ ºÉZÁÑV ¥Àæw¥À¯Á¥ÉÃPÉë ¨ÉÃqÀzÀ ¸À£Áå¹.
£Á£ÀÄ ¸ÀtÚªÀ¤zÁÝUÀ ¨É¼ÀUÉgÉ £ÁgÁAiÀÄt¥ÀÄgÀPÉÌ ºÉÆÃzÁUÀ ±ÉéÃvÀ ªÀ¸ÀÛçzsÁj ¸À£Áå¹AiÀÄAvÉ ºÀ¸À£ÀÄäRzÀ vÁvÀ£À£Àß  ªÉÆzÀ® ¨Áj £ÉÆÃr PËvÀÄPÀ¢AzÀ “CzÀÄ ªÀÄzÀgï vÉgɸÁ£Á..?” CAvÀ zÉÆqÀØ¥Àà£À£Àß PÉýzÁUÀ zÉÆqÀØ¥Àà ‘ºËzÀÄ’ JA§AvÉ vÀ¯ÉUÀÄtÄPÀÄ ºÁQzÀ £É£À¥ÀÄ FUÀ®Æ ºÀ¹AiÀiÁVzÉ. ¤£Éß ¥ÀÄgÀďɯwÛ£À ªÉüÉAiÀÄ°è ºÀ¼ÉAiÀÄ ¥ÀĸÀÛPÀUÀ¼À£Àß vÀqÀPÁqÀĪÁUÀ PÀtÂÚUÉ ©zÀÝ  ‘ªÀÄgÉAiÀįÁ¢ÃvÉ.?’ vÉUÉzÀÄ NzÀ®Ä DgÀA©ü¸ÀÄvÀÛ¯Éà vÁvÀ£À £É£À¥ÀÄUÀ¼ÀÄ ªÀÄgÀÄPÀ½¹ J®èªÀÇ ºÁUÉAiÉÄà CPÀëgÀUÀ¼ÁV ‘aPÀÌgÀAUÀ’£À°è §gÉzÀÄPÉÆAqÀÄ©lÖªÀÅ..vÀªÀÄäµÀÖPÉÌ vÁªÉÃ..

Sunday, August 7, 2011

ನರ’ಸಿಮ್ಮಾ’ ನ ನೆನಪು..

               ಅವನೊಬ್ಬ ಹಿಡಿದ ಕೆಲಸ ಮುಗಿಸಿಯೇ ತೀರುವ ಛಲಗಾರ. ಅವನ ಎದಿರು ವಿಚಾರ ಚರ್ಚೆಯಲ್ಲಿ ಗೆದ್ದವರನ್ನ ನಾನು ನೋಡಲೇ ಇಲ್ಲ. ಅವನೊಬ್ಬ ಚಾರಣಿಗ, ಸಾಹಿತಿ, ಛಾಯಾಚಿತ್ರಗಾರ, ಹಾಡುಗಾರ, ಲೇಖಕ, ನಾಟಕಕಾರ, ನಟ. ಅವನೊಬ್ಬ ಬಹುಮುಖ ಪ್ರತಿಭೆ. ಅವನೊಬ್ಬ ಜಗತ್ತಿನ ಆಳ ಉದ್ದ ಅಗಲವನ್ನ ಅಳೆದ ಮಾಂತ್ರಿಕ. ಒಟ್ಟಾರೆ ಅವನು ಎಲ್ಲವನ್ನೂ ಗೆದ್ದ....ಜವರಾಯನೊಬ್ಬನ ಹೊರತುಪಡಿಸಿ...!
                "ಸತ್ತೀ ನೀನು ಎಸ್ಸೈ ಪೋಸ್ಟ್ ಗೆ ಅಪ್ಲಿಕೇಶನ್ ತಂಗೊಂಡಿಲ್ಲ ಯಾಕೆ..? ಅಂದ. "ನಮಗೆಲ್ಲಾ ಯಾಕಣ್ಣ ಆ ಹಗಲು ಗನಸು ಎಷ್ಟು ದುಡ್ಡು ರೆಡಿ ಮಾಡ್ಕಂಡಿದ್ದಿಯಾ  ಎಸ್ಸೈ ಪೋಸ್ಟ್ ಬಗ್ಗೆ ಮಾತಾಡ್ತಾ ಇದ್ದಿಯಾ ?" ಅಂದೆ. "ಮಗನೇ ದುಡ್ದು ದುಗ್ಗಾಣಿ ಏನು ಇಲ್ಲ recruitment ತುಂಬಾ transparent ಆಗಿ ನಡಿತಾ ಇದೆ. ನಾನೂ   apply ಮಾಡ್ತಾ ಇದೀನಿ. ನೀನೂ ಒಂದು ಅರ್ಜಿ ಗುಜರಾಯ್ಸು ನೋಡಾನ" ಅಂದ.
                  ತನ್ನ ಬದುಕ ಯಾನದಲ್ಲಿ ಒಳ್ಳೆಯದು ಕೆಟ್ಟದ್ದು ಎಲ್ಲವನ್ನೂ ಅನುಭವಿಸಿದ್ದ. ಅವನು ನಡೆದು ಬಂದ ಹೆಜ್ಜೆ ಅವನ ಜೀವನದ ಮೊದಲ ಗುರು. ಆ ಕಾರಣಕ್ಕಾಗಿ ಬದುಕನ್ನ ತನಗಿಂತ ಹೆಚ್ಚು ಪ್ರೀತಿಸುತ್ತಿದ್ದ. ಬಡತನದಲ್ಲಿ ಹುಟ್ಟಿ ಬೆಳೆದು ಕಷ್ಟದಲ್ಲಿಯೇ ಕಲಿತ. "ನಿನ್ನ ಸಾಮರ್ಥ್ಯಕ್ಕೆ ಮೇಷ್ಟ್ರು ಕೆಲಸಕ್ಕೆ ಯಾಕೆ ಹೋಗ್ತೀಯಾ..ಅದೂ contract basis ಗೆ.?" ಅಂದದ್ದಕ್ಕೆ "ಮೊದಲು ಹೊಟ್ಟೆಗೆ ಆಮೇಲೆ ಬಟ್ಟೆಗೆ..."  ಅಂದಿದ್ದ. 
                ಶಿಕ್ಷಕನಾದ,  ಕಷ್ಟಕ್ಕೆ ಪೋಲಿಸ್ ಪೇದೆಯಾದ, ಅಬಕಾರಿ ಇನ್ಸ್ಪೆಕ್ಟರ್ ಹುದ್ದೆಗೆ, ನಂತರ ಪೋಲಿಸ್ ಸಬ್  ಇನ್ಸ್ಪೆಕ್ಟರ್  ಹುದ್ದೆಗೆ ಆಯ್ಕೆಯಾದ. ಆನಂತರ ಕೆ,ಎ,ಎಸ ಬರೆದು ತಹಸಿಲ್ದಾರ್ ಹುದ್ದೆಗೆ ಆಯ್ಕೆಯಾದ. ಅವನು ಬಯಸಿದ ಎಲ್ಲಾ ಹುದ್ದೆಗಳು ಅವನನ್ನ ನಿರಾಸೆ ಮಾಡಲಿಲ್ಲ.
                    "ನಾವು ತೋರಿಸುವ ಹುಡುಗಿಯನ್ನ ತಾವು ಮದುವೆ ಆಗೋಕೆ ಇಚ್ಛೆ ಪಟ್ಟರೆ  ಕೆ,ಎ,ಎಸ ಹುದ್ದೆ  ಮಾಡಿಕೊಡ್ತೀವಿ"  ಅಂದದ್ದಕ್ಕೆ ನಯವಾಗಿ ತಿರಸ್ಕರಿಸಿದ್ದ "ತನ್ನ ಸ್ವಂತ ಪರಿಶ್ರಮದಿಂದ  ಕೆ,ಎ,ಎಸ ಅಧಿಕಾರಿಯಾದ. ನಂತರ ಅದೇ  ಹುಡುಗಿಯನ್ನ  ಇಷ್ಟಪಟ್ಟು  ಮದುವೆಯಾದ. ಸದನದ ಉಪ ಸ್ಪೀಕರ್ ರವರ ಸಂಬಂಧಿಯಾಗಿದ್ದಳು ಅವನು ಕೈ ಹಿಡಿದ ಹುಡುಗಿ. ನರಸಿಂಹನ ಆಶಯಗಳಿಗೆ ಹೇಳಿ ಮಾಡಿಸಿದಂತೆ ಇದ್ದರು ಸೀಮಾ. ಸಿನಿಮೀಯ ಘಟನೆಗಳು ನಡೆದವು ನರಸಿಂಹನ ಜೀವನದಲ್ಲಿ. 
                 ಕರ್ನಾಟಕ ಪೋಲಿಸ್ ಅಕಾಡೆಮಿ ಯಲ್ಲ್ಲಿ ರಸ ಸಂಜೆ ಕಾರ್ಯಕ್ರಮದಲ್ಲಿ ನಮ್ಮ ಜಿಲ್ಲೆಯ ಅಧಿಕಾರಿಗಳ ತಂಡ ಒಂದು event ಮಾಡಿದ್ದೆವು. ಸತ್ಯ ಹರಿಶ್ಚಂದ್ರ  ಸಿನೆಮಾದ ಕುಲದಲ್ಲಿ ಕೀಳ್ಯಾವುದೋ  ಹಾಡಿಗೆ ನನ್ನ ನಿರ್ದೇಶನದಲ್ಲಿ  ಹೆಜ್ಜೆ ಹಾಕಿದ್ದೆವು ನಾವೆಲ್ಲ. ಆ ನೃತ್ಯದಲ್ಲಿ ಹೆಣ ಹೊತ್ತು ತರುವ ಗುಂಪಿನ ಮುಂದೆ ನರಸಿಂಹ ಹೊಗೆಯ ಕೂಳು ಹೊತ್ತೊಯ್ಯುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದ...!
                 ಮದುವೆಗೆ ವಾರದ ಮುಂಚೆ ೩ ಬಾರಿ ಮನೆಗೆ ಬಂದವನು ಮದುವೆಯಾಗುವ ಹುಡುಗಿಯನ್ನ ಕರೆದುಕೊಂಡು ಬಂದಿದ್ದ. "ನಿನ್ನ ಮನೆಗೆ ಫಸ್ಟ್ ಬರ್ತಾ ಇರೋದು ಮಗನೆ ಚೆನ್ನಾಗಿ ನೋಡ್ಕೊಂಡು ಕಳಿಸು ನಮ್ಮನ್ನ"  ಅಂದಾಗ ಬಾ  ಪುಣ್ಯಾತ್ಮ ನಮ್ಮ ಭಾಗ್ಯ ಅಂದುಕೊಂಡಿತ್ತು ಮನಸು ಒಳಗೆ.
                 "ಅದೊಂದು ಭೀಕರ ಅಪಘಾತ. ನೂರಾರು ಅಡಿ ಯಿಂದ ಬಿದ್ದಿತ್ತು ಕಾರು. ನೀರಲ್ಲಿ ಅರ್ಧ ಕಾರು ಮುಳುಗಿತ್ತು. ಮುಂದೆ ಕುಳಿತಿದ್ದ ಡ್ರೈವರ್ ನೀರಲ್ಲಿ ಮುಳುಗಿಯೇ ಸತ್ತಿದ್ದರು. ಹಿಂದೆ ಕುಳಿತಿದ್ದ ಇವರಿಬ್ಬರಲ್ಲಿ ನರಸಿಂಹರಾಜುರವರ ಪ್ರಾಣ ಅಲ್ಲಿಯೇ  ಹೋಗಿತ್ತು. ಸೀಮಾ ಪರಿಸ್ಥಿತಿ sirious ಆಗಿದೆ. ದೊಡ್ಡ ಕಣಿವೆಯ ಕಂದಕ ಅದು. ಆ ಮೂವರನ್ನ ಮೇಲಕ್ಕೆ ಎತ್ತಲಿಕ್ಕೆ ಒಂದು ದಿವಸ ಆಯ್ತು. ಸೀಮಾ ಒಂದು ಮರದ ಮೇಲೆ ಸಿಕ್ಕಿ ಹಾಕಿಕೊಂಡಿದ್ದಕ್ಕೆ ಅವಳ ಜೀವ ಉಳಿದುಕೊಂಡಿದೆ".  ಸೀಮಾರ ಸೋದರಿ ಹೇಳುತ್ತಿದ್ದಾಗ ನಿಜವಾ ತಮಾಷೆಯಾ..! ಅನ್ನಿಸಿತು. ಮತ್ತೆ  ತಿಂಗಳ  ನಂತರ ಸೀಮಾ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ತೀರಿಕೊಂಡರು ಅಂತ ತಿಳಿಯಿತು.
                 ನರಸಿಂಹನ ಅಂತ್ಯ ಸಂಸ್ಕಾರದ ದಿನ ಜಾತ್ರೆ ಎನ್ನುವ ಹಾಗೆ ನೆರೆದಿದ್ದರು  ಜನ.  ಊರಿಗೆ ಊರೇ ಕಣ್ಣೀರು ಹಾಕಿತ್ತು ಅವನ ಸಾವಿಗೆ. ಮಧುಚಂದ್ರದ ಪ್ರಯಾಣದಲ್ಲ್ಲಿ ಮದುವೆಯಾದ ವಾರಕ್ಕೆ  ದೂರದ ದೆಹಲಿ-ಶಿಮ್ಲಾದ ರಸ್ತೆಯ ಮಾರ್ಗದಲ್ಲಿನ ಕಾಡು ಕಂದಕದಲ್ಲಿ ಸಾವು ಬಂದು ಕರೆದೊಯ್ದಿತ್ತು  ನರಸಿಂಹನನ್ನು. ಆಗ ಕೊಪ್ಪ ತಾಲೂಕಿನಲ್ಲಿ ತಹಶೀಲ್ದಾರ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದ ನರಸಿಂಹ ಅಲ್ಪಾವಧಿಯಲ್ಲಿಯೇ ಜನಮನ ಗೆದ್ದಿದ್ದರಿಂದ ಅವನ ಸಾವು ಕೊಪ್ಪದ ಜನತೆಗೆ ಭರಿಸಲಾಗದ ನೋವನ್ನ ತಂದುಬಿಟ್ಟಿತ್ತು. ತಾಲೂಕಿನ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ, ಸಂಘ ಸಂಸ್ಥೆಗಳು ಶೋಕಾಚರಣೆಯನ್ನ ಮಾಡಿದ್ದವು. ತಾಲೂಕು ಕೇಂದ್ರದಲ್ಲಿ ಯುವಕ ಸಂಘವೊಂದು ಕ್ರಿಕೆಟ್ ಟೂರ್ನಿಯನ್ನ ಆಯೋಜಿಸಿತ್ತು ಇವನ ಸ್ಮರಣಾರ್ಥಕವಾಗಿ.
                   ನನ್ನ ಬ್ಲಾಗಿನ ಹವ್ಯಾಸವನ್ನು ಪ್ರಾರಂಬಿಸಲು ಪ್ರೋತ್ಸಾಹಿಸಿದ್ದೇ ನರಸಿಂಹ. ಅವನ ನೆನಪು ಬಂದಾಗಲೆಲ್ಲ್ಲಾ    ಅವನ ಕವನ (?) ಬ್ಲಾಗನ್ನು ತೆರೆದು ಮೊದಲ ಕವನದತ್ತ ಕಣ್ಣು ಹಾಯಿಸುತ್ತಿರುತ್ತೇನೆ. ಬ್ಲಾಗಿನ ಪ್ರೊಫೈಲ್ ಗೆ ’ಸಿಮ್ಮಾ’ ಅಂತ   ಶೀರ್ಷಿಕೆ ಕೊಟ್ಟಿದ್ದಾನೆ. ಅದರ ಸಾಲುಗಳು ಹೀಗಿವೆ.
                    ಹೊರಟು ಹೋಗುತ್ತೇನೆ, ಭುವಿಗೆ ಬಿಸಿ ತಟ್ಟುವ ಮೊದಲೇ
                    ಒರಟು ಮೈ ಹೊತ್ತು, ಮನವನ್ನೂ ಒರಟು ಮಾಡಿಕೊಂಡು
                    ಹೆಜ್ಜೆಯಿಡುವೆದೆ   ಮುಳ್ಳು ಚುಚ್ಸಿತೆಂಬ  ಭಯವಿಲ್ಲ
                    ಬಿರುಗಾಳಿ ಬಿಸಿಲಿಗಂಜಿಕೆಯಿಲ್ಲ.
                    ಅವುಗಳಲ್ಲೇ ಸಿಕ್ಕು ಬಿದ್ದಿರುವೆನಲ್ಲ್ಲ
                    ಆದರೂ ನಿರಾಶಾವಾದಿಯಾಗಿಲ್ಲ
                    ಸಾಗುತಿರುವೆನು ಮತ್ತೊಂದು ಒಲವ ಸುರಿವ
                    ತೀರದೆಡೆಗೆ.
                            
           ಕಾಕತಾಳೀಯವೆಂಬಂತೆ ’ಹೊರಟು ಹೋಗುತ್ತೇನೆ...! ಅಂತಾ  ಶೀರ್ಷಿಕೆ ನೀಡಿದ್ದಾನೆ ನರಸಿಂಹ ಈ ಕವನಕ್ಕೆ. www.4-u-1ly.blogspot.com ಅಂತ ಲಾಗ್ ಆಗಿದ್ದಾನೆ. ಕವನದ ನಂತರ ಸ್ನೇಹಿತರೊಬ್ಬರು " ಮದುವೆಯಾದ ಮೇಲೆ ಬ್ಲಾಗ್ಗೆ ಬರುತ್ತಿಲ್ಲವಲ್ಲಾ" ಅಂತ ಕಾಮೆಂಟ್ ಮಾಡಿದ್ದಾರೆ. ನರಸಿಂಹರಾಜು ನನ್ನ ನೆನೆದಾಗಲೆಲ್ಲ  His life was gentle, and the eliments so mixed in him that nature might stand up'' ಅಂದ ಅನಾಥ ಶೇಕ್ಸ್ ಪಿಯರ್ ನ ಸಾಲು ನೆನಪಾಗಿ ಕಣ್ಣು ತೇವಗೊಳ್ಳದೇ ಇರುವುದಿಲ್ಲ.
                    
                     

Saturday, August 6, 2011

ನಿಯತ್ತಿನ ಜಾತಿ ಯಾವುದು..?

             ’ಜಮೀರ್” ಅದೊಂದು typical  character .  "ಸಾರ್  ಸಿಕ್ಕಾಪಟ್ಟೆ ತಲೆ ಬಿಸಿಯಾಗಿದೆ  ಮಿಕ್ಕಿದ್ದು  ನಾಳೆ ನೋಡೋಣ ಬನ್ನಿ ಬನ್ನಿ ಬೈಟು ಟೀ ಕುಡ್ಯೋಣ" ಅಂದ ಜಮೀರ್.  "ನಿನ್ನ capacity ಗೆ ಎರಡು ಹವರ್ ಬಿಸಿಲಿಗೆ ನೆತ್ತಿ ಸುಟ್ಟರೆ ಪಾಷಾಣ ತಿಂದ ವದ್ದಾಡೋ ಇಲಿ ಹಂಗ್ ಆಡ್ತಿಯಲ್ಲೋ  ಪುಣ್ಯಾತ್ಮ"  ಜಮೀರನ ಮೇಲಿನ ಹರೀಶ್ ರ  ಕೋಪಕ್ಕೂ ಬೈಟು ಟೀನ ಅಗತ್ಯತೆ ಇರುವುದು ನನಗೆ ಅರ್ಥವಾಯ್ತು.  "ಬನ್ನಿ ಸ್ಟ್ರಾಂಗ್ ಟೀ ಕುಡಿಯೋಣ" ಅಂದಾಗ ಜಮೀರನ ಮೊಗದಲ್ಲಿ ಮಂದಹಾಸ. "ಸೀಮೆಗಿಲ್ಲದ ಮನುಷ್ಯ" ಅಂತ ಗೊಣಗಾಡುತ್ತಿದ್ದ ಹರಿ.  "ಎಷ್ಟಯ್ಯ ನಿನ್ನ ಸಿನೆಮಾಗೆ ಇಂಟರ್ವಲ್..? ಟೀ ಕುಡಿಯುತ್ತಲೇ ಜಮೀರನಿಗೆ  ಹರೀಶರ ಕ್ಲಾಸ್ ಮುಂದುವರೆದಿತ್ತು. "ಸಾರ್ ನಮ್ಮದು ಸಿನೆಮಾ ಅಲ್ಲ ಅರ್ಧ ಘಂಟೆ ಧಾರವಾಹಿ . ಹೆಚ್ಚು ಅಂದ್ರೆ ಒಂದ್ ಹವರ್ ರಾಮ್ ಗೋಪಾಲ್ ವರ್ಮ ಫಿಲಂ  ಥರ. ಇಷ್ಟ ಇದ್ದರೆ ಇಟ್ಕೋಳಿ  ಇಲ್ಲಾಂದ್ರೆ ಇನ್ನೊಂದ್ ಕೆಲಸ ನೋಡ್ಕೊಳ್ತೀನಿ"  ಅಂದ ಕೂಡಲೇ ಹರಿ "ನಿನ್ನ ಪಾದ ಜೆರಾಕ್ಸ್ ಕೊಡಪ್ಪ ಗುರುವೇ ಇಲ್ಲಿ" ಅಂದ. "ಸಾರ್ ನೀವು ಸರೀನೆ ಬಿಡಿ. ನಾನೊಬ್ಬ ಸಿಕ್ಕಿದ್ದೀನಿ ನಿಮಗೆ ಬಿಟ್ಟಿ". ಅಂದಾಗ ನಮ್ಮೆಲ್ಲರಿಗೂ ನಗು. ಕೊನೆಗೆ ಜಮೀರನಿಗೂ ಸಹ. "ಸಾರ್ ಕಾಸ್ಟಿಂಗ್ ವರ್ಕ್.. ಇದರ ಮಧ್ಯೆ ಇದ್ದು ವದ್ದಾಡೋರ್ಗೆ ಗೊತ್ತು ಕಷ್ಟ ಏನು ಅಂತ. ನಮ್ ಹರಿ ಸಾರ್ ಇದನ್ನ ಈಜಿ ಅಂದ್ಕೊಂಡ್ ಬಿಟ್ಟಿದ್ದಾರೆ." ಅಂದವನ ಮುಖದಲ್ಲಿ ಮಹತ್ತರ ಕೆಲಸ ತಲೆಯ ಮೇಲೆ  ಭಾರವಾಗಿ ಬಿದ್ದಂತೆ ಕಾಣುತ್ತಿತ್ತು. "ಲೇ ಮಾನ ಮರ್ಯಾದೆ ಇಟ್ಕೋ  ಸ್ವಲ್ಪ"  ಅಂದ ಹರಿ.  "ಸಾರ್ ಸ್ವಲ್ಪ ಉಳಿಸಿಕೊಂಡಿದ್ದೀನಿ  ನಿಮ್ ಜೊತೆ ಸೇರ್ಕಂಡು" ಅಂದ..!
             "ಜಮೀರನ ಮಾತೇ  ಹಾಗೆ. ಹಿಂದೆ ಮುಂದೆ ಯೋಚಿಸದೆ ವದರಿಹಾಕುತ್ತಾನೆ. ಇಷ್ಟು ಮಾತನಾಡುವವನು order ಗಳು ಜಾಸ್ತಿ  ಇದ್ದಾಗ ನನಗಿಂತಲೂ ಬುಸಿಯಾಗಿಬಿಡುತ್ತಾನೆ ಫ್ಯಾಕ್ಟರಿಯಲ್ಲಿ. ಮುತುವರ್ಜಿಯಾಗಿ ಮಾಡಿಮುಗಿಸುತ್ತಾನೆ ಹೇಳಿದ ಕೆಲಸವನ್ನ"  ಎನ್ನುವ  ಹರೀಶರಲ್ಲಿ ತನ್ನ ನಲ್ಮೆಯ ಸೇವಕನ ಮೇಲೆ ಅಪಾರ ಧನ್ಯತಾ ಭಾವ ಕಾಣುತ್ತಿರುತ್ತದೆ. "ಜಮೀರ್ ನನ್ನ ರೈಟ್ ಹ್ಯಾಂಡ್" ಅನ್ನುವದನ್ನ ಮರೆಯಲಿಲ್ಲ.
               ದೂರದ ಚನ್ನರಾಯಪಟ್ಟಣದಿಂದ ಕಾಂಕ್ರಿಟ್ ಕಾಡಿಗೆ ಬಂದ ಜಮೀರ್ ತನ್ನ ಬದುಕನ್ನ ಪ್ರಾರಂಬಿಸಿದ್ದು ಐನೂರು ರೂಪಾಯಿಗೆ. ಅದೊಂದು ಚಿಕ್ಕಪೇಟೆಯ ಪೋಟೋ ಸ್ಟುಡಿಯೋ ಅವನ ಬೆಂಗಳೂರಿನ  ಬದುಕಿಗೆ  ಪೀಠಿಕೆ  ಹಾಕಿತ್ತು. ಅದ್ಯಾವುದೋ ಬಡ ಹುಡುಗಿಗೆ ಪುಕ್ಸಟ್ಟೆ ಫೋಟೋ ತೆಗೆದುಕೊಟ್ಟ ಜಮೀರನಿಗೂ ಆ ಹೆಣ್ಣು ಮಗಳಿಗೂ   ಇಲ್ಲದ ಸಂಬಂಧ  ಕಲ್ಪಿಸಿದಕ್ಕೆ  ತನ್ನ ಇದ್ದ ಒಂದೇ ಒಂದು ವೇರ್  ಬ್ಯಾಗ್ ನ ಜಿಪ್ ಜೀರಿಕೊಂಡು  ಸ್ಟುಡಿಯೋ ಬಿಟ್ಟು ಹೋದನಂತೆ ಜಮೀರ. "ಸಾರ್ ಅವತ್ತು ಕಲ್ಪನಾ ಟಾಕಿಸ್ನಲ್ಲಿ  ರವಿಚಂದ್ರನದು  'ಚಿನ್ನ' ಸಿನೇಮಾ ನೋಡಿಬಿಟ್ಟೆ ಬೇಜಾರ್ ಆಗಿ" ಅಂದ. "ಬೆಂಗಳೂರ್ ನಲ್ಲಿ ನಾವ್ ಎಷ್ಟೇ ನಿಯತ್ತಾಗಿ ದುಡಿದ್ರೂ ಅನುಮಾನದಿಂದ ನೋಡ್ತಾರೆ ಜನ ನಮ್ಮನ್ನ ಅವರಪ್ಪನ್ ಮನೆ ಗಂಟು ತಿಂದಿದ್ದಿವಿ ಅನ್ನೋ ಥರ  ಅಲ್ವಾ..?" ಅಂದಾಗ ನನಗೆ ಹೌದು ಅನ್ನದೆ ವಿಧಿಯಿರಲಿಲ್ಲ. 
              ಒಮ್ಮೆ ಹರೀಶ್ ತಮ್ಮ ಸ್ನೇಹಿತರ ಗೋಡೌನ್ ನಿಂದ  ಉತ್ಪನ್ನವನ್ನ ತರಿಸಿದ್ದರಂತೆ. ಅದರ ಹಣವನ್ನು ಹರಿಶರು ಜಮೀರ್ ಕೈಗೆ ಕೊಟ್ಟು ಸ್ನೇಹಿತರ  ಕಚೇರಿಗೆ ಕೊಟ್ಟು ಬರಲು ಹೇಳಿ ಕಳುಹಿಸಿದ್ದರಂತೆ. ಅದರಂತೆ ಆ ದಿನದಂದೇ ಆ ಕಚೇರಿಗೆ ಖುದ್ದು ಜಮೀರನೇ ತೆರಳಿ ಆಪೀಸ್  ಬಾಯ್ ಗೆ ಹಣ ನೀಡಿ ಹರೀಶ್ ರಿಗೆ ಹಣ ತಲುಪಿಸಿದ ಬಗ್ಗೆ ತಿಳಿಸಲು ಹೇಳಿ ಕಚೇರಿಗೆ ಹಿಂತಿರುಗಿದ ಜಮೀರ್, ಹರೀಶ್ ರ  ಅನುಮತಿ ಪಡೆದು ಊರಿಗೆ ಹೋದನಂತೆ. ಸ್ನೇಹಿತರ ಆಪೀಸ್ ಬಾಯ್ ಹಣವನ್ನ ತನ್ನ ಮಾಲಿಕನಿಗೆ ಕೊಡದೇ   ಗಂಟು ಮೂಟೆಯ ಸಹಿತ  ಜಾಗ ಖಾಲಿ ಮಾಡಿ ಓಡಿಹೋದನಂತೆ . ಇದರಿಂದ ಕಸಿವಿಸಿಯಾದ ಹರಿ ಜಮೀರನ ಮೇಲೆ ಬೇಸರ ಮಾಡಿಕೊಂಡು ಊರಿನಿಂದ ಬಂದ ಕೂಡಲೇ "ಅವನ್ಯಾವನೋ ಕೈಲಿ ಕೊಟ್ಟಿದ್ಯಲ್ಲೋ ಅಷ್ಟೊಂದು  ದುಡ್ಡನ್ನ..?" ಅಂದಾಗ "ಸಾರ್ ನೀವ್ ನಂಗ್ ಕೊಟ್ಟಂಗೆ ನಾನು ಅವನಿಗೆ ಕೊಟ್ಟೆ" ಅಂದಾಗ ಹರಿ ಬೆಪ್ಪರಾಗಿ ಸುಮ್ಮನಾದರಂತೆ.
            ಜಮೀರ್ ಹನ್ನೆರೆಡು ವರ್ಷಗಳಿಂದಲೂ ಪ್ರಾಮಾಣಿಕವಾಗಿ ತನಗಾಗಿ ಏನನ್ನು ಅಪೇಕ್ಷಿಸದೆ  ಹಗಲಿರುಳೆನ್ನದೆ ತನ್ನ ಬಳಿ ದುಡಿಯುತ್ತಿರುವ ಬಗ್ಗೆ ಹರೀಶ್ ರಿಗೆ ಅಪಾರ ಗೌರವವಿದೆ. ಈಗ್ಗೆ ತಿಂಗಳುಗಳ ಹಿಂದೆ ಜಮೀರನ ತಂಗಿಯ ಮದುವೆಗೆ ತನ್ನಿಂದ ಐವತ್ತು ಸಾವಿರ ಹಣವನ್ನು ಕೊಡುಗೆಯಾಗಿ  ಕೊಟ್ಟಿದ್ದರು ಹರಿ. " ಸಾರ್ ದುಡ್ಡು ಸಾಕಾಗ್ತಾ ಇಲ್ಲ ಏನ್ಮಾಡ್ಲಿ...? ಅಂದ ಜಮೀರ್. "ನಿಮ್ಮ ಬಾಸ್ ಗೆ ಬೆಂಡೆತ್ತಿ ವಸೂಲಿ ಮಾಡು ಇನ್ನೊಂದೈವತ್ ಸಾವಿರ" ಅಂದದ್ದಕ್ಕೆ "ಸಾರ್ ಮೊನ್ನೆ ಸಂಬಳಾನು ಎರಡು ಸಾವಿರ ಜಾಸ್ತಿ ಮಾಡಿದ್ದಾರೆ ಸಾರ್, ಐನೂರ್   ರುಪಾಯ್ ಗೆ  ದುಡಿಯಾಕ್  ಬಂದವನು ನಾನು..   ಇಪ್ಪತೈದು ಸಾವಿರ ಸಂಬಳ ಕೊಡ್ತಾ ಇದ್ದಾರೆ ನಮ್ ಸಾರ್  ಈಗ. ಯಾವ್ ಮುಖ ಇಟ್ಕೊಂಡ್ ಮತ್ತೆ ಕೇಳ್ಲಿ.. ಸಾಕು ಬಿಡಿ ಸಾರ್" ಅಂದುಬಿಟ್ಟ. "ಕೋಳಿಗೆ ಅದೆಂಥದೋ ಜ್ವರ ಅಂತೆ ಅಂತ ಹೇಳಿ ಮದುವೆ ಬಿರ್ಯಾನಿ ಕ್ಯಾನ್ಸಲ್ ಮಾಡಿಸು" ಅಂತ ತಮಾಷೆ ಮಾಡಿದ್ದಕ್ಕೆ  "ನೀವ್  ಹೇಳ್ದಂಗೆ  ಮಾಡಕಾಗುತ್ತ ಸಾರ್...?" ಅಂತ ಕೊರಗಿದ್ದ ಜಮೀರ್.
             "ಮದುವೆಗೆ ಬರ್ಲಿಲ್ಲ ಸಾರ್ ನೀವು, ಹರಿ ಸಾರ್ ಜೊತೆಗೆ.. "ಜಮೀರ್ ಬೇಸರ ಮಾಡಿಕೊಂಡಿದ್ದ. "ಸ್ವಲ್ಪ ಬ್ಯುಸಿ ಇದ್ದೆ ಮಾರಾಯ" ಅಂದದ್ದಕ್ಕೆ "ನಿಮ್ಮದು ಯಾವಾಗ್ಲೂ ಷೋ ಅಪ್ ಬಿಡಿ ಸಾರ್ ನಮ್ ಕೆಲಸಗಳಂದ್ರೆ.." ಅಂತ ಜಾಡಿಸಿದ್ದ. "ನಿನ್ ಮದುವೆಗೆ ಬರ್ತೀನಿ ಬಿಡು" ಅಂದೆ. "ಇವಾಗಿಂದಾನೆ  ಕಾಯ್ಲಾ ಸಾರ್.." ಅಂದು ನಕ್ಕು ಬಿಟ್ಟ. "ಸಾರ್ ಮದುವೆಗೆ ಮತ್ತೆ ಐವತ್ತು ಸಾವಿರ ಸಾಲ ಮಾಡಿದ್ದೆ.. ಪೈನಾನ್ಸ್ ಸಾಲ. ಎರಡೂವರೆ ಪರ್ಸೆಂಟು ಬಡ್ಡಿ. ಹರೀಶ್ ಸಾರ್ ಗೆ ವಿಷಯ ಅದೆಂಗ್ ಗೊತ್ತಾಯ್ತೋ ನಿನ್ನೆ ದುಡ್ಡು ಕಟ್ಟಿ ಚುಕ್ತಾ ಮಾಡಿಸಿದ್ದಾರೆ. ಸಂಬಳದಲ್ಲಿ ಮುರ್ಕೊಳ್ಳಿ ಅಂದ್ರೆ ಬೇಡ ಬಿಡು ಅಂತಿದ್ದಾರೆ..ಹೆಂಗೆ ಸಾರ್ ಇದು ಇವರ ವ್ಯವಹಾರ..?" ಅಂದಾಗ ಮಾಲೀಕ, ನೌಕರ ಅಂದ್ರೆ ಹೀಗಿರಬೇಕು ಅಂತ ಅನ್ನಿಸಿತು.ದಿನಬೆಳಗಿನ ಪತ್ರಿಕೆಗಳಲ್ಲಿ, ಟಿ.ವಿ  ಮಾಧ್ಯಮಗಳಲ್ಲಿ  ಮೋಸ, ವಂಚನೆ, ಹಣ ದುರುಪಯೋಗದ ಕೇಸುಗಳನ್ನ ನೋಡುವಾಗ ನಿಯತ್ತಿನ ನಮ್ಮ ಜಮೀರ್,  ಕೆಲಸಗಾರರನ್ನ ಹೀಗೆಯೂ ನಡೆಸಿಕೊಳ್ಳಬಹುದು ಎಂಬುದಕ್ಕೆ ಹರಿ ಇಬ್ಬರೂ ನೆನಪಾಗುತ್ತಾರೆ. 
             ನಿನ್ನೆ ಜಮೀರ್ ವಿಜಯನಗರದಲ್ಲಿ  ಮೊಬೈಲ್ ಕಳೆದುಕೊಂಡನಂತೆ . "ಸಾರ್ ಮೊದ್ಲು  ಒಂದು ಪೋಲಿಸ್ ಕಂಪ್ಲೈಂಟ್ ಕೊಡಬೇಕಲ್ವ ಸಾರ್...? ಮುಂಡೆ ಮಕ್ಳು ಕಳ್ರು ಕೈಗೆ ಮೊಬೈಲ್ ಸಿಕ್ಬಿಟ್ರೆ ನಮಗೆ ಪ್ರಾಬ್ಲಮ್  ಆಗುತ್ತೆ ಅಲ್ವಾ...?  ಆಮೇಲ್ ನೀವು ಪೋಲಿಸ್ರು ಬಿಡ್ತೀರ ನಮ್ಮನ್ನ..?" ಅಂದಾಗ  "ಇಲ್ಲ  ಬಿಡಲ್ಲ" ಅಂತ ನಕ್ಕು ಬಿಟ್ಟೆ.  "ಆಹಹಾ.. ಪೋಲಿಸ್ ಬುದ್ದಿ ನೋಡಿ..!"  ಅಂದು ಮತ್ತೊಮ್ಮೆ ಕರೆ ಮಾಡ್ತೀನಿ ಅಂತ ಗಡಿಬಿಡಿಯಲ್ಲಿ ಪೋನ್ ಕಟ್ ಮಾಡಿಬಿಟ್ಟ. ಅದ್ಯಾಕೋ ಇವತ್ತು  ಜಮೀರ್ ನ ಬಗ್ಗೆ ಬರೆಯಬೇನಿಸಿ ಬ್ಲಾಗ್ ನತ್ತ ಮುಖ ಮಾಡಿದೆ. ಜಾತಿಗಳಿಂದ ನಿಯತ್ತನ್ನು ಅಳೆಯುತ್ತಿದ್ದ  ಪ್ರಶ್ನೆಗಳಿಗೆ  ಉತ್ತರ ಸಿಕ್ಕಿದೆ.
                              
          

Thursday, May 5, 2011

’ಭೀಳ್’-ಕೊಡುಗೆ


      ಒಂದು ಸರಳ ಸಮಾರಂಭ. ನಮ್ಮ ಸಂಸ್ಥೆಯೊಂದರ ಹಿರಿಯ ಪೋಲಿಸ್ ಅಧಿಕಾರಿಯೊಬ್ಬರ ವರ್ಗವಾಗಿತ್ತು. ಭೀಳ್ಕೊಡುಗೆ ನೀಡುವ ಸಲುವಾಗಿ ಎಲ್ಲಾ ಹಿರಿಯ ಕಿರಿಯ ಅಧಿಕಾರಿಗಳು ಹಾಗೂ ಕೆಲ ಹಿರಿಯ ನಿವೃತ್ತ ಅಧಿಕಾರಿಗಳೂ  ಉಪಸ್ಥಿತರಿದ್ದರು.ವರ್ಗಾವಣೆಗೊಂಡ ಸನ್ಮಾನ್ಯರು ದಕ್ಷ, ಪ್ರಾಮಾಣಿಕ ಮತ್ತು ಸಂಸ್ಥೆಯಲ್ಲಿ ಅವರು ಅವಿಸ್ಮರಣೀಯ ಸೇವೆ ಸಲ್ಲಿಸಿದ್ದರಿಂದ ಸಹಜವಾಗಿ ಎಲ್ಲರಿಗೂ ಈ ಕಾರ್ಯಕ್ರಮದ ಮೂಲಕ ಒಲ್ಲದ ಮನಸ್ಸಿನಲಿ ಕಳುಹಿಸಿಕೊಡುವ ಅನಿವಾರ್ಯತೆ ಒದಗಿಬಂದಿತ್ತು. ಪೋಲಿಸ್ ಇಲಾಖೆಯಲ್ಲಿ ವರ್ಗಾವಣೆಗಳು ತೀರಾ ಸಾಮಾನ್ಯವಾದರೂ ಉತ್ತಮ ಅಧಿಕಾರಿಗಳ ಜೊತೆಗಿನ ಒಡನಾಟ ಬಹಳ ಕಾಲಗಳವರೆಗೂ ನೆನೆಪುಗಳಾಗಿ ಉಳಿದುಕೊಂಡುಬಿಡುತ್ವೆ.
          ಬ್ಲಾಗಿನಲ್ಲಿ ಹಂಚಿಕೊಳ್ಳ ಹೊರಟಿರುವ ವಿಷಯ ಇದಲ್ಲ. ಆ ಸಮಾರಂಭದಲ್ಲಿ ಅನಿಸಿಕೆಗಳನ್ನ ಮಾತನಾಡುವ ಪೋಲಿಸ್ ಅಧೀಕ್ಷಕರೊಬ್ಬರು ತಮ್ಮ ವರ್ಗಾವಣೆ ಸಮಯದಲ್ಲಿ ನಡೆದ ಸ್ವಾರಸ್ಯಕರ ಸನ್ನಿವೇಶವನ್ನು ಎಲ್ಲರೊಂದಿಗೆ  ಬಿಚ್ಚಿಟ್ಟರು. ಚಿಕ್ಕಮಗಳೂರಿನಲ್ಲಿ ಅವರು ಜಿಲ್ಲಾ ರಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿ ಅಲ್ಪಾವಧಿಯಲ್ಲಿಯೇ ಜನಮನ ಗೆಲ್ಲುವಂತೆ ಪೋಲಿಸ್ ಇಲಾಖೆಯ ಕಾರ್ಯವೈಖರಿಯಲ್ಲಿ ಅಪಾರ ಬದಲಾವಣೆಯನ್ನು ತಂದಿದ್ದರು. ಇವರ ಕಾರ್ಯವೈಖರಿ ಸಹಿಸದ ಕೆಲವರು ಅವರನ್ನು ವರ್ಗಾವಣೆ ಮಾಡಿಸಲು ಹರಸಾಹಸ ಪಟ್ಟಿದ್ದರು. ಅತ್ಯಂತ ಪ್ರಾಮಾಣಿಕ, ದಕ್ಷ, ನಡೆ ನುಡಿಯಲ್ಲಿ ನೇರ ಸರಳರಾದ ಅವರು ಇದ್ದಷ್ಟು ಸಮಯದಲ್ಲಿ ಇಲಾಖೆಯಲ್ಲಿನ ಸೋಗಲಾಡಿತನವನ್ನ ಹೋಗಲಾಡಿಸಿ ಜನರಲ್ಲಿ ಪೋಲಿಸ್ ಇಲಾಖೆಯ ಬಗ್ಗೆ ಗೌರವಾಧರ ಬರುವಂತೆ ಮಾಡಿದ್ದರು.
            ಆ ಅಧಿಕಾರಿಯವರ ಸ್ನೇಹಿತರು ಶಿವಮೊಗ್ಗದಿಂದ ಬಸ್ಸಿನಲ್ಲಿ ಬರುವಾಗ್ಗೆ ಇಬ್ಬರು ಸಮವಸ್ತ್ರದಲ್ಲಿದ್ದ ಸಹಪ್ರಯಾಣಿಸುತ್ತಿದ್ದ ಪೇದೆಗಳು ವರ್ಗವಾಗಿದ್ದ ಅಧಿಕಾರಿಯ ವಿಚಾರವನ್ನು ಪ್ರಸ್ತಾಪಿಸಿ " ಹೋದ್ರೆ ಹೋಯ್ತು ಬಿಡಪ್ಪ. ತೊಲಗಲಿ ಸಧ್ಯ ಈಯಪ್ಪಾನೂ ತಿನ್ನಲ್ಲ ಬೇರೆಯವರಿಗೂ ತಿನ್ನಕೆ ಬಿಡಲ್ಲ " ಅಂದುಕೊಳ್ಳುತ್ತಿದ್ದರಂತೆ.  ಇದನ್ನು ಸ್ನೇಹಿತರಿಂದ  ಕೇಳಿದ  ಅವರು ಕೊಂಚವೂ ವಿಚಲಿತರಾಗದೆ  ನಕ್ಕು ಸುಮ್ಮನಾದರಂತೆ.
           ಆ ಪ್ರಸಂಗವನ್ನು ತಮ್ಮ ಜೀವನದ ಮರೆಯಾಲಾಗದ ’ಸ್ವಾರಸ್ಯ’ ಅಂತ ಬಣ್ಣಿಸಿದ ಅವರು ಪ್ರತಿಯೊಂದು ಭೀಳ್ಕೊಡುಗೆ ಸಮಾರಂಭಗಳಲ್ಲೂ ಇದನ್ನು ಮನದಲ್ಲೇ ಮೆಲುಕು ಹಾಕುತ್ತಿರುತ್ತೇನೆ ಅಂದಾಗ ನಗುವ ಸರದಿ ನಮ್ಮದಾಗಿತ್ತು.
         ಅತ್ಯಂತ ಪ್ರಾಮಾಣಿಕ ದಕ್ಷ ಅಧಿಕಾರಿಗಳ ಸ್ವಗತ ಹೀಗೆಯೇ ವಿಲಕ್ಷಣವಾಗಿರತ್ತಾ..? ಅಂತ ಅಂದುಕೊಳ್ಳುತ್ತೇನೆ, ಸುಮಾರು ಸಾರಿ . ತಮ್ಮ ಕಾರ್ಯದಕ್ಷತೆಯಿಂದಾಗಿ ಮುಖ್ಯವಾಹಿನಿಗೆ ಬರುವ ಅನೇಕ ಇಂತಹ ಅಧಿಕಾರಿಗಳನ್ನ ಸಮಾಜ contradictoryಯಾಗಿ ನೋಡುತ್ತದೆ ಏಕೆ ? ಹೌದು, ಬಸ್ಸಿನಲ್ಲಿದ್ದ ಆ ಪೇದೆಗಳು ಸಮಾಜದ ಒಂದು ಭಾಗವೇ ಹೊರತು ಸಂಪೂರ್ಣ ಸಮಾಜವನ್ನ ಪ್ರತಿನಿಧಿಸುವುದಿಲ್ಲ ಎಂದಾದರೂ  ಇಂಥಹವರೂ  ಇದ್ದಾರಲ್ಲ ಈ ಭೂಮಿಯ ಮೇಲೆ ಅಂತ ಸಂಕಟವಾಗುತ್ತದೆ ಮನಸ್ಸಿಗೆ. ಏನೇ ಆದರೂ assets ಅನ್ನಿಸಿಕೊಳ್ಳೋ ಇಂಥಹ  ಅಧಿಕಾರಿಗಳು ಯಾವುದಕ್ಕೂ ಪ್ರತಿಕ್ರಿಯಿಸದೇ  ಮಗುಮ್ಮಾಗಿ ತಮ್ಮಷ್ಟಕ್ಕೆ ತಾವು ತಮ್ಮ ಕೆಲಸವನ್ನ ಅತ್ಯಂತ ಕಾಳಜಿಯಿಂದ ನಿಷ್ಠೆಯಿಂದ ಮಾಡಿಕೊಂಡು ಬರುತ್ತಿದ್ದಾರೆ. ಇಂಥಹ ಅಧಿಕಾರಿಗಳು ನಮ್ಮ ನಡುವೆ ಇರುವ ಕಾರಣದಿಂದಲೇ ಕರ್ನಾಟಕ ಪೋಲಿಸ್ ದೇಶದಲ್ಲೇ ಉತ್ತಮ ಅನ್ನಿಸಿಕೊಂಡಿದೆ.
          ವರ್ಗಾವಣೆ ಎಂದರೆ ನಿದ್ರೆಯಲ್ಲಿ ಬೆಚ್ಚಿಬೀಳುವ ನಮ್ಮ ’ಶಾಹಿ’ ಜನಗಳ ನಡುವೆ ಇಂಥಹ ಕೆಲ ಅಪರೂಪದ ಅಧಿಕಾರಿಗಳು     ನಮ್ಮಲ್ಲಿದ್ದಾರೆ ಎಂಬುದೇ ನಮ್ಮ ಹಿರಿಮೆ.

Thursday, February 24, 2011

’ಶ್ರೀ’ ಕಂಠ

          ಸನ್ಮಾನ್ಯ ಕುಣಿಗಲ್ ಶ್ರೀಕಂಠ 1974 ರಲ್ಲಿ ಕರ್ನಾಟಕ ಪೋಲಿಸ್ ಇಲಾಖೆಗೆ ಆರಕ್ಷಕ ಉಪ ನಿರೀಕ್ಷಕರಾಗಿ  ನೇಮಕಗೊಂಡ ಅಧಿಕಾರಿ. ಬೆಂಗಳೂರು,ಹಾಸನ,ಮೈಸೂರು ಶಿವಮೊಗ್ಗ ಜಿಲ್ಲೆಗಳಲ್ಲಿ ಸೇವೆ. ಹಲವಾರು ಕಾನೂನು ಸುವ್ಯವಸ್ಥೆ ಭಂಗವಾದ  ಸಂಧರ್ಭಗಳಲ್ಲಿ   ಪ್ರಾಣದ  ಹಂಗು ತೊರೆದು ಎದುರಿಸಿ ನಿಂತವರು. ಹಲವಾರು  ಸೂಕ್ಷ್ಮ ಪ್ರಕರಣಗಳ ತನಿಖೆ ಕೈಗೊಂಡ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಿದ ದಕ್ಷರು. ತನಿಖೆಯಲ್ಲಿ ಕ್ರಮಬದ್ಧ ಆಧುನಿಕ ಸಂಪರ್ಕ ಸಾಧನ, ಕಂಪ್ಯೂಟರ್ ನ ಬಳಕೆ ಇವರ ಕೌಶ್ಯಲತೆ. ರಾಷ್ಟ್ರದಲ್ಲಿಯೇ ಪ್ರಥಮ ಸೈಬರ್ ಪೋಲಿಸ್ ಠಾಣೆಯ ಆರಂಭದ ರೂವಾರಿಗಳಲ್ಲಿ ಒಬ್ಬರು. ಇದೇ ಠಾಣೆಯ ಪ್ರಥಮ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಸೈಬರ್ ಲೋಕದಲ್ಲಿ ಜರುಗುವ ಅಪಾರ ಆರ್ಥಿಕ ನಷ್ಟ,  ಮತ್ತು ಇತರೆ ಸೈಬರ್ ಅಪರಾಧಗಳನ್ನ ಪತ್ತೆ ಹಚ್ಚಿದವರು.  COD ಯಂಥಹ ಸಂಸ್ಥೆಯಲ್ಲಿ ಸುಮಾರು ಹತ್ತು ವರ್ಷಗಳಿಗಿಂತಲೂ ಹೆಚ್ಚು ಕಾಲ ಕರ್ತವ್ಯ ನಿರ್ವಹಿಸಿ ಪೋಲಿಸ್ ಅಭಿರಕ್ಷೆಗಳಲ್ಲಿ ಸಂಭವಿಸುವ ಅನೈಸರ್ಗಿಕ ಸಾವುಗಳ ಕುರಿತು ಸುಮಾರು 12 ವರ್ಷಗಳ ಕಾಲ ಅಧ್ಯಯನ ನಡೆಸಿ ವರದಿ ತಯಾರು ಮಾಡಿದವರು. ಈ ವರದಿಯು ಇಂದಿಗೂ ಪೋಲಿಸ್ ತರಬೇತಿ ಕೇಂದ್ರಗಳಲ್ಲಿ ಮಾದರಿ  ಅಧ್ಯಯನದ ವಿಷಯವಾಗಿ IPS ಅಧಿಕಾರಿಗಳವರೆಗೆ ಬೋಧಿಸುತ್ತಿರುವುದು ಇವರ ವಿಧ್ವತ್ತಿಗೆ ಸಾಕ್ಷಿ. ಸಂಘರ್ಷಕ್ಕೊಳಗಾದ ಬಾಲಕರ ಕುರಿತು, (juvenile justice act) ಮಹಿಳೆ ಮತ್ತು ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳು. ವರದಕ್ಷಿಣೆ ನಿಷೇದ ಕಾಯ್ದೆ (Dowry Prohibition Act) ಕುರಿತ ಉಪನ್ಯಾಸಗಳು, ಈ ಕುರಿತು ಹೊರ ತಂದ ಪುಸ್ತಕಗಳು ಅನೇಕ. ಶ್ರೀಯುತರು ಲೋಕಾಯುಕ್ತ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸಿ ಆದಾಯಕ್ಕೂ ಮೀರಿದ ಆಸ್ತಿ ಸಂಪಾದನೆ  (Disproportionate Assets) ಮಾಡಿದ ಪ್ರಕರಣಗಳ ತನಿಖಾ ವಿಧಿ ವಿಧಾನಗಳ ಕುರಿತ ಉಪನ್ಯಾಸ ಕೈಪಿಡಿ ಅನನ್ಯ.
                ಸನ್ಮಾನ್ಯರು ಈ ತಿಂಗಳ ಅಂತ್ಯದಲ್ಲಿ  ತಮ್ಮ 37 ವರ್ಷಗಳ ಸುಧೀರ್ಘ ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಸೇವೆಯಲ್ಲಿದ್ದ ಅಷ್ಟೂ ಅವಧಿಯಲ್ಲಿ ಮುಖ್ಯಮಂತ್ರಿಗಳ ಪದಕ, ರಾಷ್ಟ್ರಪತಿಗಳ ಪದಕ ಸೇರಿದಂತೆ ಹಲವಾರು ಗೌರವಗಳಿಗೆ  ಭಾಜನರಾಗಿದ್ದರೆ. ಸರಳ ನೇರ ಸ್ವಭಾವದ, ಪ್ರಚಾರಪ್ರಿಯತೆಯ ಸೋಗಿನಿಂದ ದೂರವಿದ್ದ ವ್ಯಕ್ತಿ. ಬಹುಶಃ ಈ ಕಾರಣಗಳಿಂದಲೇ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದ ಶ್ರೀಕಂಠರು ಇಲಾಖೆಯಿಂದ ಹೊರ ಉಳಿದರೂ ನನ್ನ ಸಹಕಾರ ಸೇವೆ ಕೊನೆಯವರೆಗೆ ಇಲಾಖೆಯೊಂದಿಗೆ ಇರುತ್ತದೆ ಎಂದು ಹೇಳುವುದನ್ನ ಮರೆಯುವುದಿಲ್ಲ. kunigal srikanta sastri ಎಂಬ ತಮ್ಮದೇ ಸೈಬರ್ ತಾಣವೊಂದನ್ನು ತೆರೆದು ತಮ್ಮ ಅನುಭವದ ತಾವು ಕಲಿತ ವಿಧ್ಯೆಯನ್ನು ಇಲಾಖೆಯ ಮುಂದಿನ ಪೀಳಿಗೆಗೂ ಉಣಬಡಿಸುತ್ತಿದ್ದಾರೆ. WISH YOU ALL THE BEST SIR.



Monday, February 21, 2011

ಚಿಕ್ಕರಂಗ ಮತ್ತು eagleton


            ಇದು eagleton ಎಂಬ ಹಸಿರು ಸುಂದರಿಯ ಒಡಲಲ್ಲಿ ಹುಟ್ಟಿದ ಚಿಕ್ಕರಂಗನೆಂಬ ಹೂ ಪಕಳೆಯ ಯಶೋಗಾಥೆ. ನಾನು ಪದೋನ್ನತಿ ಪಡೆಯುವ ಮೊದಲು  ರಾಮನಗರದ ಬಿಡದಿಯಲ್ಲಿದ್ದೆ. Eagleton golf resorts ಎಂಬ ಐಶಾರಾಮಿ ಹೋಟೆಲ್  ಬಿಡದಿಯ ಒಂದು ಆಕರ್ಷಣೆ.  ಏಷ್ಯಾ ಖಂಡದಲ್ಲಿಯೇ ಎರಡನೆಯ ಅತಿ ದೊಡ್ಡ golf ಅಂಗಳ ಇದ್ದದ್ದು ಇದರ ಜನಪ್ರಿಯತೆಗೆ ಕಾರಣ. ವಿದೇಶಿಯರೇ ಹೆಚ್ಚಾಗಿ ಬರುತ್ತಿದ್ದದ್ದು ಇಲ್ಲಿನ ವಿಶೇಷ.
           ಅಲ್ಲಿ ಚಿಕ್ಕರಂಗ ಸುಮಾರು ೧೦ವರ್ಷದ ಹಿಂದೆ ಕ್ಯಾಡಿಯಾಗಿ ಸೇರಿಕೊಂಡ. ಕ್ಯಾಡಿ  ಅಂದರೆ  ಗಾಲ್ಪ್ ಆಡುವವರ ಸಹಾಯಕ.  ಚಿಕ್ಕರಂಗ ಮಾಡುತ್ತಿದ್ದ ಕೆಲಸದ ಮಧ್ಯೆ ಆಗೊಮ್ಮೆ ಹೀಗೊಮ್ಮೆ ತಾನೂ ಗಾಲ್ಪ್ ನ ಕಿರು ಗುಂಡಿಯ ನಡುವೆ ಚೆಂಡು ಬೀಳಿಸುವ ಪ್ರಯತ್ನ ಮಾಡಿದ. ಇವನನ್ನ ನೋಡಿದ ಸಹೋದ್ಯೋಗಿಗಳು ನೀನು ಒಂದ್ ಕೈ ನೋಡೋ ಚಿಕ್ಕಾ..ಅಂದದ್ದೇ ಕೊನೆ ಮತ್ತು ಮೊದಲು ಚಿಕ್ಕರಂಗ ಹಿಂತಿರುಗಿ ನೋಡಲೇ ಇಲ್ಲ. ಇಂದು...  ಈಗಲ್ ಟನ್ ನಲ್ಲಿ ಜರಗುವ ರಾಷ್ಟ್ರ ಮಟ್ಟದ ಟೂರ್ನಿಗಳಲ್ಲಿ ಚಿಕ್ಕರಂಗ ವಿಶ್ವ ಚಾಂಪಿಯನ್. ಅಮೇರಿಕಾ,ಆಸ್ಟ್ರೇಲಿಯಾಗಳಂಥಹ  ರಾಷ್ಟ್ರ ಗಳ ಗಾಲ್ಪ್ ಪಟುಗಳು ಈ ಹಳ್ಳಿ ಹೈದನ ಮುಂದೆ ಮಂಡಿ ಬಗ್ಗಿಸಿ ಶರಣಾಗಿ ಹೋಗಿದ್ದಾರೆ.  ಇಂದು ಚಿಕ್ಕರಂಗ ಭಾರತದ ಪ್ರತಿಷ್ಟಿತ ಸಂಸ್ಥೆಗಳಿಗೆ ಕ್ರೀಡಾ ಪ್ರತಿನಿಧಿ.ಒಬ್ಬ ಹಳ್ಳಿ ಹೈದ ಈ ಎತ್ತರಕ್ಕೆ ಬೆಳೆದ ಕುರಿತು ಬಿಡದಿಯ ಜನ "ಇವನೇನಾ ನಮ್ಮ ಚಿಕ್ಕಾ..!!" ಅಂತಾ ಬಾಯಿಯ ಮೇಲೆ ಬೆರಳು ಇಟ್ಟುಕೊಳ್ಳುವ ಪ್ರಸಂಗ ನಿರ್ಮಾಣವಾಗಿದೆ.  
       ಅಂದಹಾಗೆ ಮೊನ್ನೆ times of india ಪತ್ರಿಕೆಯಲ್ಲಿ ಈತನ ಸಂದರ್ಶನ ಪ್ರಕಟವಾಗಿತ್ತು. ಸಾಧಕನ ಭೇಟಿ ಮಾಡುವ ಸಲುವಾಗಿ ವಿಚಾರಿಸಿದಾಗ ಗಾಲ್ಪ್ ಟೂರ್ನಿಗಾಗಿ ವಿದೇಶಕ್ಕೆ ಹೋಗಿದ್ದಾರೆ ಅಂತ ಗೊತ್ತಾಯಿತು.
       ಸಾಮಾನ್ಯವಾಗಿ  ಅತಿಗಣ್ಯ ವ್ಯಕ್ತಿ ಗಳು ಭೇಟಿ ನೀಡಿದ ಸಂಧರ್ಭಗಳಲ್ಲಿ ಈಗಲ್ ಟನ್ ನಲ್ಲಿ ಕರ್ತವ್ಯದ ಮಧ್ಯೆ  ಬಿಡುವಿನ ಸಮಯದಲ್ಲಿ ವಿಶಾಲವಾದ ಈಗಲ್ ಟನ್ ಎಂಬ ಹಸಿರು ಸುಂದರಿಯ ನೋಡಿ ಬೆರಗಾಗುತ್ತಿದ್ದೆ.ಆದರೆ ಅಲ್ಲಿಯೇ ಇದ್ದ ಚಿಕ್ಕರಂಗನೆಂಬ ಹೂ ಪಕಳೆಯನ್ನ ಮರೆತೆನಲ್ಲಾ ಅಂತ ನೊಂದುಕೊಳ್ಳುತ್ತಿದ್ದೇನೆ.
         ಭಾರತಾಂಬೆಯ ಮಡಿಲಿನ ಹಳ್ಳಿಕುಂಟೆಗಳಲ್ಲಿ ಅದೆಷ್ಟು ಚಿಕ್ಕರಂಗರು ಕುರಿ ಎಮ್ಮೆ ಧನಗಳ ಮಧ್ಯೆ ಮರೆಯಾಗುತ್ತಿದ್ದಾರೆಯೋ...!  ಆದರೆ ರೋಹನ್ ಗವಾಸ್ಕರ್ ಗೆ ಮಾತ್ರ IPL ನಲ್ಲಿ ಸ್ಥಾನ ಸಿಕ್ಕದಿದ್ದ ಬಗ್ಗೆ ಸುನೀಲ್ ಗವಾಸ್ಕರ್ ಮನಸ್ಸಿನಲ್ಲಿಯೇ ಆದೆಷ್ಟು ನೊಂದುಕೊಂಡರೋ  ಮಾನ್ಯ ಸುರೇಶ್ ಕಲ್ಮಾಡಿಯವರೇ ಹೇಳಬೇಕು..!
             ಅಂದ ಹಾಗೆ ಮೈಸೂರಿಗೆ ಹೋಗುವ ಮಧ್ಯೆ ನಿಮಗೆ ಸಮಯವಿದ್ದರೆ ಬಿಡದಿಯ ಬಳಿಯ ರಂಗೇಗೌಡನದೊಡ್ಡಿಗೆ ಹೋಗಿ ಬನ್ನಿ. ಇಲ್ಲವಾದಲ್ಲಿ ಯಾವುದಾದರೂ search engine ನಲ್ಲಿ chikkarangappa  ಅಂತಾ ಟೈಪು ಮಾಡಿದರೆ ಈ ಸಾಧಕನ ಚಿತ್ರಣ ತೆರೆದುಕೊಳ್ಳುತ್ತದೆ.